ಬದುಕಿನ ಅರ್ಥ ಏನು ಅಂತ ಒಂದು ಮುಸ್ಸಂಜೆ ಕೃಷ್ಣನನ್ನು ಅರ್ಜುನ ಕೇಳುತ್ತಾನೆ. ಕೃಷ್ಣ ಏನು ಹೇಳದೆ, ದೂರದಲ್ಲಿ ಹಾರುತ್ತಿದ್ದ ಹಕ್ಕಿಯನ್ನು ತೋರಿಸಿ ಹೊಡೆದುರುಳಿಸಲು ಹೆಲುಥ್ತನೆ. ಅರ್ಜುನ ಕ್ಷಣ ಮಾತ್ರದಲ್ಲಿ ಹೊದೆದುರುಲಿಸುತ್ತನೆ.
ಕೃಷ್ಣ ಹೇಳುತ್ತಾನೆ: ಆ ಹಕ್ಕಿಯ ಸಾವಿಗೆ ಕಾರಣವಾದದ್ದು ನಿನ್ನ ಪ್ರಶ್ನೆ. ಅಲ್ಲಿ ಆಕಾಶದಲ್ಲಿ ನಿರುಳ್ಳಮವಾಗಿ ಹಾರುತ್ತಿದ್ದ ಅದಕ್ಕೆ ನಿನ್ನ ಪ್ರಶ್ನೆಯಾಗಲಿ, ನನ್ನ ಉತ್ತರವಾಗಲಿ, ನಿನ್ನ ಕ್ರಿಯೆಯಾಗಲಿ ಗೊತ್ತಿಲ್ಲ. ಹೀಗಾಗಿ ಅದರ ಸಾವು ಅನಯಸ. ಒಂದು ವೇಳೆ ನಮ್ಮ ಸಂಬಾಷಣೆಯನ್ನು ಅದು ಕೇಳಿಸಿಕೊಂಡಿದ್ದರೆ ಆತಂಕ, ಭಯ ಮತ್ತು ತಪ್ಪಿಸಿ ಕೊಳ್ಳುವ ಹಪಾಹಪಿಗೆ ಸಿಲುಕುತ್ತಿತು.
ನಾವು ಅಷ್ಟೇ, ಹಾರುತ್ತಿರಬೇಕು. ಬಾಣ ಬಂದು ಬೀಳಿಸುವ ತನಕ ಆಕಾಶ ನಮ್ಮದು.